ವಿಶ್ವ ಮಣ್ಣು ದಿನಾಚರಣೆ – 5/12/23 ದೊಡ್ಡರಾಯಪ್ಪನಹಳ್ಳಿ

ದೊಡ್ಡರಾಯಪ್ಪನಹಳ್ಳಿಯಲ್ಲಿ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಶಿಬಿರಾರ್ಥಿಗಳು ದಿನಾಂಕ 5/12/2023 ರಂದು ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಮಣ್ಣಿಗೆ ಪೂಜೆಗೈಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಶಿಬಿರಾರ್ಥಿಗಳು ಮಣ್ಣು ಮತ್ತು ಜಲ ಸಂರಕ್ಷಣೆಯ ಕುರಿತಾಗಿ ಕಿರುನಾಟಕ ಪ್ರದರ್ಶಿಸಿ ರೈತ ಬಾಂಧವರಲ್ಲಿ ಜಾಗೃತಿ ಮೂಡಿಸಿದರು. ಮಣ್ಣು ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ದೊಡ್ಡರಾಯಪ್ಪನಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗಣ್ಯರು ಹಾಗೂ ರೈತರು ಬಹುಮಾನಗಳನ್ನು ವಿತರಿಸಿದರು. ಮಣ್ಣು ವಿಜ್ಞಾನಿಯಾದ ಡಾ. ಉಮೇಶ್ …

ಬರಡು ರಾಸುಗಳ ತಪಾಸಣೆ ಮತ್ತು ಪಶು ಚಿಕಿತ್ಸಾ ಶಿಬಿರ – ದೊಡ್ಡರಾಯಪ್ಪನಹಳ್ಳಿ

ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ 4/12/23 ರ ರಂದು ಬರಡು ರಾಸುಗಳ ತಪಾಸಣೆ ಹಾಗೂ ಪಶು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮವು ಗೋಪೂಜೆಯಿಂದ ಪ್ರಾರಂಭವಾಯಿತು.ನಂತರ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ, ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟಿನ್ ಯುಕ್ತ ಆಹಾರವನ್ನ ನೀಡಬೇಕು. ಇದರಿಂದ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಕೃಷಿ ವಿಜ್ಞಾನಿ ಡಾ.ವೆಂಕಟೇಗೌಡರು ರೈತರಿಗೆ …

ಟ್ರ್ಯಾಕ್ಟರ್ ಹಾಗೂ ಸಿಂಪಡಣಾ ಯಂತ್ರಗಳ ನಿರ್ವಹಣೆ.

ಟ್ರ್ಯಾಕ್ಟರ್ ಹಾಗೂ ಸಿಂಪಡಣಾ ಯಂತ್ರಗಳ ನಿರ್ವಹಣೆ ಬಹಳ ಮುಖ್ಯವಾಗಿದ್ದು,ಸರಿಯಾಗಿ ನಿಯಂತ್ರಣ ಮಾಡದಿದ್ದಲ್ಲಿ ಅವುಗಳು ತಮ್ಮ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳಬಹುದು.ಆದ್ದರಿಂದ ಸಮಯಕ್ಕೆ ಸರಿಯಾಗಿ ಅವುಗಳ ನಿರ್ವಹಣೆ ಮಾಡುವುದು ಅತ್ಯಗತ್ಯವಾಗಿದೆ.ಇದರ ಕುರಿತಾಗಿ ಗ್ರಾಮಸ್ಥರಿಗೆ ತಿಳಿಸಲಾಯಿತು. View this post on Instagram A post shared by ನಮ್ಮ ದೊಡ್ಡರಾಯಪ್ಪನಹಳ್ಳಿ (@rawep_doddarayappanahalli)

ಕೀಟ/ರೋಗನಾಶಕ ಗಳ ಕುರಿತಾಗಿ ಸಾಮಾನ್ಯ ಸಭೆ.

1.ಸಂಪರ್ಕ ಹಾಗೂ ವವಸ್ಥಿತ ಕೀಟ/ರೋಗನಾಶಕ ಸಂಪರ್ಕ ಹಾಗೂ ವ್ಯವಸ್ಥಿತ ಕೀಟ/ರೋಗನಾಶಕಗಳು ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಸಲಾಯಿತು.ಅದರ ಜೊತೆಗೆ ಯಾವ ಕೀಟಕ್ಕೆ ಯಾವ ವಿಧದ ಔಷಧಿಯನ್ನು ಸಿಂಪಡಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು. 2.ಕೀಟನಾಶಕಗಳ ಮೇಲಿನ ಸುರಕ್ಷತಾ ಚಿಹ್ನೆಗಳು. ಕೆಂಪು – ಅತ್ಯಂತ ವಿಷಕಾರಿಹಳದಿ – ಅತಿ ವಿಷಕಾರಿ. ನೀಲಿ – ಸಾಧಾರಣ ವಿಷಕಾರಿ. ಹಸಿರು – ಕೊಂಚ ವಿಷಕಾರಿ. ಈ ಸೂಚನೆಗಳ ಕುರಿತಾಗಿ ಜನರಿಗೆ ಮಾಹಿತಿ ನೀಡಲಾಯಿತು. 3.ವಿವಿಧ ಬೆಳೆಗಳಲ್ಲಿ ವಿವಿಧ ಕೀಟನಾಶಕಗಳ ಸುರಕ್ಷತಾ …

ಕೊಳವೆ ಬಾವಿ ಜಲ ಮರುಪೂರಣ

ರಾಜ್ಯದಲ್ಲಿ ಲಕ್ಷಾಂತರ ಕೊಳವೆ ಬಾವಿಗಳಿವೆ. ಅವುಗಳಲ್ಲಿ ಬಹಳಷ್ಟು ಬತ್ತಿವೆ. ಕೊಳವೆ ಬಾವಿ ನಮ್ಮದಾದರೂ, ಅದರಲ್ಲಿರುವ ನೀರು ಮಾತ್ರ ಎಲ್ಲರಿಗೂ ಸೇರಿದ್ದು, ಕೊಳವೆ ಬಾವಿಯಿಂದ ನೀರು ತೆಗೆಯುವವರು ಮಳೆ ನೀರಿನ ಮೂಲಕ ಅದನ್ನು ಮರುಪೂರಣ ಮಾಡಬೇಕು. ಜಲ ಮರುಪೂರಣಕ್ಕೆ ಬೇಕಾಗುವ ಸಾಮಗ್ರಿಗಳು • ನೈಲಾನ್ ಪರದೆ • ದಿಂಡು ಕಲ್ಲುಗಳು • 40 ಮಿ.ಮೀ ಗಾತ್ರದ ಜೆಲ್ಲಿ (ದಪ್ಪ ಜೆಲ್ಲಿ) •20 ಮಿ.ಮೀ ಗಾತ್ರದ ಬೇಬಿ ಜೆಲ್ಲಿ (ಸಣ್ಣ ಜೆಲ್ಲಿ) •ಇದ್ದಲು •ಮರಳು ಜಲ ಮರುಪೂರಣ ವ್ಯವಸ್ಥೆ ಅಳವಡಿಸುವ …

ICL ಸಹಭಾಗಿತ್ವ ಸಭೆ.

ದೊಡ್ಡರಾಯಪ್ಪನಹಳ್ಳಿಯಲ್ಲಿ ಕೃಷಿ ಕಾರ್ಯಾನುಭವ ಕಾರ್ಯಕ್ರಮ ದಡಿಯಲ್ಲಿ ಶಿಬಿರಾರ್ಥಿಗಳು ದಿನಾಂಕ 23/11/2023 ರಂದು ICL (Israel Chemicals Ltd.) ಕಂಪನಿಯ ಸಹಭಾಗಿತ್ವದಲ್ಲಿ ‘ ಸಮಗ್ರ ಪೋಷಕಾಂಶ ನಿರ್ವಹಣೆ ‘ಯ ಕುರಿತು ಕಾರ್ಯಕ್ರಮವನ್ನು ಆಯೋಜಿಸಿದ್ದರು.ಪ್ರಾದೇಶಿಕ ಬೇಸಾಯ ಶಾಸ್ತ್ರಜ್ಞರಾದ ರಾಜೇಶ್ ರವರು ಕಂಪನಿಯ ಉತ್ಪನ್ನ ಗಳು ಹಾಗೂ ಅವುಗಳ ಬಳಕೆ ಮತ್ತು ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.ಬೆಳೆಗಳಲ್ಲಿ ಪೋಷಕಾಂಶ ನಿರ್ವಹಣೆಯ ಬಗ್ಗೆ ತಿಳಿಸಿದರು.ಕೃಷಿ ವಿಶ್ವವಿದ್ಯಾನಿಲಯ, ಜಿ ಕೆ ವಿ ಕೆ , ಬೆಂಗಳೂರಿನ ಸಸ್ಯರೋಗಶಾಸ್ತ್ರಜ್ಞ ರಾದ ಡಾ. ಮಂಜುನಾಥ್ ರವರು ಸ್ಥಳೀಯವಾಗಿ …

ಕಿರುನಾಟಕ. ವಿಷಯ – ಬೆಳೆಗಳಿಗೆ ಔಷಧಿ ಸಿಂಪಡಿಸುವಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು.

ದೊಡ್ಡರಾಯಪ್ಪನಹಳ್ಳಿಗೆ ಗ್ರಾಮೀಣ ಕಾರ್ಯನುಭವ ಕಾರ್ಯಕ್ರಮದ ಸಲುವಾಗಿ ಆಗಮಿಸಿರುವ ಜಿಕೆವಿಕೆ ವಿದ್ಯಾರ್ಥಿಗಳು ಕೀಟನಾಶಕ ಹಾಗೂ ರೋಗನಾಶಕ ಸಿಂಪಡಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಕಿರುನಾಟಕ ವನ್ನು ಪ್ರದರ್ಶನ ಮಾಡಿದರು.ಅದರ ಜೊತೆಗೆ ಕೀಟನಾಶಕಗಳ ವಿಧ ಹಾಗೂ ಅವು ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಮಾಹಿತಿ ನೀಡಿದರು.ಕೀಟನಾಶಕ ಗಳ ವಿಷಕಾರಿ ಅಂಶದ ಕುರಿತಾಗಿ ತಿಳಿಸಿಕೊಟ್ಟರು.ಔಷಧಿ ಸಿಂಪಡಿಸುವಾಗ ಧರಿಸಬೇಕಾದ ಸುರಕ್ಷತಾ ಕನ್ನಡಕ,ಕೈಗವಸು,ಮುಖಗವಸು ಗಳನ್ನು ರೈತರಿಗೆ ನೀಡಿ ಇದರ ಕುರಿತಾಗಿ ಜಾಗೃತಿ ಮೂಡಿಸಲಾಯಿತು.ಸಭೆಯಲ್ಲಿ ಹಲವಾರು ರೈತರು ಪಾಲ್ಗೊಂಡಿದ್ದರು.. “ಔಷಧಿ ಸಿಂಪಡಿಸುವಾಗ ಇರಲಿ ಎಚ್ಚರ”

ಗ್ರಾಮೀಣ ಸಹಭಾಗಿತ್ವ ಅಧ್ಯಯನ – ದೊಡ್ಡರಾಯಪ್ಪನಹಳ್ಳಿ

ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ ರೈತರ ಸಮಸ್ಯೆಗಳನ್ನು ಅರಿಯಲು ಹಾಗೂ ಮಾಹಿತಿ ಸಂಗ್ರಹಕ್ಕಾಗಿ ಗ್ರಾಮೀಣ ಸಹಭಾಗಿತ್ವ ಅಧ್ಯಯನ ವನ್ನು ಆಯೋಜಿಸಲಾಗಿತ್ತು. ಹಲವಾರು ರೈತರು ಪಾಲ್ಗೊಂಡಿದ್ದರು.ಈ ಕಾರ್ಯಕ್ರಮದಲ್ಲಿ ವಿವಿಧ ಚಟುವಟಿಕೆಗಳನ್ನು ರೈತರಿಂದ ಮಾಡಿಸಲಾಯಿತು. 1.ಗ್ರಾಮ ನಕ್ಷೆ 2.ಬೆಳೆ ಗೋಪುರ 3.ಆಹಾರ ಗೋಪುರ 4.ಬೆಳೆ ಕ್ಯಾಲೆಂಡರ್ 5.ಚಲನವಲನ ನಕ್ಷೆ 6.ಚಪಾತಿ ನಕ್ಷೆ 7.ದಿನಚರಿ 8. ಆದ್ಯತೆ ಶ್ರೇಣಿ 9.ತಂತ್ರಜ್ಞಾನ ನಕ್ಷೆ 10.ಸಮಸ್ಯೆ ವೃಕ್ಷ 11. ಭೂ ಹಿಡುವಳಿ 12.ವಿವಿಧ ವಿಧದ ಮನೆಗಳು……

ಜೈವಿಕ ಗೊಬ್ಬರಗಳು ಹಾಗೂ ಬೀಜೋಪಚಾರ

ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ದೊಡ್ಡರಾಯಪ್ಪನಹಳ್ಳಿ ಗೆ ಆಗಮಿಸಿರುವ ಕೃಷಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಸಾಮಾನ್ಯ ಸಭೆಯಲ್ಲಿ ಮಣ್ಣಿನ ಮಾದರಿ ಸಂಗ್ರಹಣೆ ಹಾಗೂ ಬೀಜೋಪಚಾರ ದ ಕುರಿತಾಗಿ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಮಾಡಿದರು.ಮಣ್ಣಿನ ಮಾದರಿ ಸಂಗ್ರಹಣೆಯ ಮಹತ್ವ ಹಾಗೂ ವಿಧಾನಗಳನ್ನು ರೈತರಿಗೆ ತಿಳಿಸಿದರು.ಜೊತೆಗೆ ಜೈವಿಕ ಗೊಬ್ಬರ ಹಾಗೂ ಜೈವಿಕ ಕೀಟನಾಶಕ ಗಳೊಂದಿಗೆ ಬೀಜೋಪಚಾರ ಬಗೆಗೆ ಮಾಹಿತಿ ತಿಳಿಸಿದರು.ರೈತರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.ರೈತರಾದ ನಾಗರಾಜ್, ಹರ್ಷಿತ್,ಅಭಿಷೇಕ್…ಮುಂತಾದವರು ಇದ್ದರು.

ಕ್ಷೇತ್ರ ಭೇಟಿ

1/11/23 ದೊಡ್ಡರಾಯಪ್ಪನಹಳ್ಳಿಯ ನಂಜೇಗೌಡರ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ ಅಲ್ಲಿ ರಸ್ಟ್,ಬೂದು ರೋಗಗಳ ಗುಣಲಕ್ಷಗಳನ್ನು ಗಮನಿಸಿದೆವು.ದ್ರಾಕ್ಷಿ ಬೆಳೆಯ ಕುರಿತಾದ ಮಾಹಿತಿಯನ್ನು ಪಡೆದುಕೊಂಡೆವು. ಕುರಿ ಸಾಕಾಣಿಕೆಯಲ್ಲಿ ಸ್ಟಾಲ್ ಫೀಡಿಂಗ್ ಅನ್ನು ಗಮನಿಸಿ ಅದರಿಂದಾಗುವ ಪ್ರಯೋಜನಗಳನ್ನು ತಿಳಿದುಕೊಂಡೆವು. 2/11/23 ಹರ್ಷಿತ್ ರವರ ದಾಳಿಂಬೆ ತೋಟಕ್ಕೆ ಭೇಟಿ ನೀಡಿ ಅಲ್ಲಿ ಸಮರುವಿಕೆಯನ್ನು ಗಮನಿಸಿದೆವು.ಸಮರುವಿಕೆಯನ್ನು ಮಾಡುವಾಗ ಸಾಮಾನ್ಯ ರೆಂಬೆ ಹಾಗೂ ವಾಟರ್ ಶೂಟ್ ಗಳನ್ನು ಗುರುತಿಸಿ ವಾಟರ್ ಶೂಟ್ ಗಳನ್ನು ಮಾತ್ರ ಸಮರಬೇಕು. ವಾಟರ್ ಶೂಟ್ ಸಾಮಾನ್ಯ ರೆಂಬೆ ಗಿಂತ ತೆಳುವಾಗಿರುತ್ತವೆ ಹಾಗೂ …