Author Archives: Chinmayisri A S
ದೊಡ್ಡರಾಯಪ್ಪನಹಳ್ಳಿಯ ಗ್ರಾಮಸಭೆ
ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆಯ ಅಡಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಬಿಎಸ್ಸಿ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ಶಿಬಿರಾರ್ಥಗಳಾಗಿ ದೊಡ್ಡರಾಯಪ್ಪನಹಳ್ಳಿಗೆ ಆಗಮಿಸಿರುತ್ತಾರೆ.ಗ್ರಾಮೀಣ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು ಹಾಗು ರೈತರು ಎದುರಿಸುವ ಸಮಸ್ಯೆಗಳನ್ನು ಅರಿತುಕೊಳ್ಳುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.ಗ್ರಾಮಸಭೆಯಲ್ಲಿ ಶಿಬಿರಾರ್ಥಿಗಳು ತಾವು ಬಂದಿರುವ ಉದ್ದೇಶವನ್ನು ತಿಳಿಸಿ ಗ್ರಾಮಸ್ಥರಲ್ಲಿ ಸಹಕಾರ ಕೋರಿದರು.ದೊಡ್ಡಬಳ್ಳಾಪುರ – ರೈತ ಸಂಪರ್ಕ ಕೇಂದ್ರದಕೃಷಿ ಅಧಿಕಾರಿಯಾದ ನವೀನ ಕುಮಾರವರು ಪಾಲ್ಗೊಂಡಿದ್ದರು. ಪ್ರಸ್ತುತದಲ್ಲಿ ಕೃಷಿಯು ಕೃಷಿ ವ್ಯವಹಾರವಾಗಿ ಪರಿವರ್ತನೆಯಾಗಿದೆ.ರೈತರು ಸಾಂಪ್ರದಾಯಿಕ ಕೃಷಿಯನ್ನು ತ್ಯಜಿಸಿ ರೈತರು …
ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ
ನವೆಂಬರ್ 1 ದ ರಂದು ಕನ್ನಡ ರಾಜ್ಯೋತ್ಸವದ ಅಂಗವಾಗಿ ದೊಡ್ಡರಾಯಪ್ಪನಹಳ್ಳಿಯ ಸರ್ಕಾರಿ ಶಾಲಾ ಮಕ್ಕಳ ಜೊತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಶಾಲಾ ಮುಖ್ಯೋಪಾಧ್ಯಾಯರಾದ ನವೀನ್ ರವರು ಹಾಗೂ ದೊಡ್ಡರಾಯಪ್ಪನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ವೇತಾ ಮುನಿಶಾಮಿಗೌಡ ರವರು ಧ್ವಜಾರೋಹಣವನ್ನು ನೆರವೇರಿಸಿದರು.ಮಕ್ಕಳಿಗೆ ಕನ್ನಡ ಕಂಠಪಾಠ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು.ಶಾಲಾ ಶಿಕ್ಷಕರಾದ ಹನುಮಂತಪ್ಪ ಹಾಗೂ ವಸುಧಾ ರವರು ಕರ್ನಾಟಕ ಏಕೀಕರಣದ ಕುರಿತಾಗಿ ಮಾಹಿತಿ ನೀಡಿದರು. https://www.instagram.com/reel/CzIrlZnLJ2C/?igshid=MzRlODBiNWFlZA==ಕನ್ನಡ
ನಮ್ಮ ದೊಡ್ಡರಾಯಪ್ಪನಹಳ್ಳಿ..
ನಮ್ಮ ಕೃಷಿ ವಿಶ್ವವಿದ್ಯಾನಿಲಯ ಹಾಗೂ ಕೃಷಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜನೆಗೊಂಡಿರುವ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮವು ನಮ್ಮ ದೊಡ್ಡರಾಯಪ್ಪನಹಳ್ಳಿಯಲ್ಲಿ ಯಶಸ್ವಿಯಾಗಿ ಸಾಗುತ್ತಿದೆ.ದೊಡ್ಡರಾಯಪ್ಪನಹಳ್ಳಿ ಗ್ರಾಮವು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿದೆ.ರಾಗಿ,ಜೋಳ,ಹೂಕೋಸು,ಎಲೆಕೋಸು, ಹೀರೇಕಾಯಿ, ಹಾಗಲಕಾಯಿ,ಪಡವಲಕಾಯಿ,ಸೇವಂತಿಗೆ ಹಾಗೂ ಗುಲಾಬಿ ಇಲ್ಲಿನ ಪ್ರಮುಖ ಬೆಳೆಗಳಾಗಿವೆ. 31/10/2023 ರಂದು ಊರಿನ ಸುತ್ತ ಜಾಥಾ ಮಾಡಿ ಗ್ರಾಮಸ್ಥರಿಗೆ ನಾವು ಬಂದಿರುವ ಉದ್ದೇಶವನ್ನು ತಿಳಿಸಿದೆವು. https://www.instagram.com/reel/CzIiginrrbL/?igshid=MzRlODBiNWFlZA==ಜಾಗೃತಿಯ ಜಾಥಾ View this post on Instagram A post shared by ನಮ್ಮ ದೊಡ್ಡರಾಯಪ್ಪನಹಳ್ಳಿ (@rawep_doddarayappanahalli) …

You must be logged in to post a comment.