ಬರಡು ರಾಸುಗಳ ತಪಾಸಣೆ ಮತ್ತು ಪಶು ಚಿಕಿತ್ಸಾ ಶಿಬಿರ – ದೊಡ್ಡರಾಯಪ್ಪನಹಳ್ಳಿ

ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದ ಅಂಗವಾಗಿ 4/12/23 ರ ರಂದು ಬರಡು ರಾಸುಗಳ ತಪಾಸಣೆ ಹಾಗೂ ಪಶು ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವು ಗೋಪೂಜೆಯಿಂದ ಪ್ರಾರಂಭವಾಯಿತು.ನಂತರ ಗಣ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಪಶುಸಂಗೋಪನೆ, ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟಿನ್ ಯುಕ್ತ ಆಹಾರವನ್ನ ನೀಡಬೇಕು. ಇದರಿಂದ ಹಾಲಿನಲ್ಲಿ ಫ್ಯಾಟ್ ಪ್ರಮಾಣ ಹೆಚ್ಚುವುದರಿಂದ ರೈತರಿಗೆ ಹೆಚ್ಚಿನ ಆದಾಯ ಸಿಗಲಿದೆ ಎಂದು ಕೃಷಿ ವಿಜ್ಞಾನಿ ಡಾ.ವೆಂಕಟೇಗೌಡರು ರೈತರಿಗೆ ಸಲಹೆ ನೀಡಿದರು.



ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿಎಸ್ಸಿ ವಿದ್ಯಾರ್ಥಿಗಳು ಕೃಷಿ ಗ್ರಾಮೀಣ ಕಾರ್ಯಾನುಭವ ಕಾರ್ಯಕ್ರಮವನ್ನ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ನಡೆಸುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಗ್ರಾಮದಲ್ಲಿ ತಂಗಿರುವ ಕೃಷಿ ವಿದ್ಯಾರ್ಥಿಗಳು ರೈತರ ಜೊತೆ ಬೇಸಾಯ ಮಾಡುತ್ತಿದ್ದಾರೆ.

ರೈತರಿಗೆ ಅನುಕೂಲವಾಗಲೆಂದು ಇಂದು ಬರಡು ರಾಸುಗಳ ತಪಾಸಣೆ ಮತ್ತು ಪಶು ಆರೋಗ್ಯ ಚಿಕಿತ್ಸಾ ಶಿಬಿರವನ್ನ ಅಯೋಜನೆ ಮಾಡಲಾಗಿತ್ತು. ಕೃಷಿ ಮತ್ತು ಪಶುಸಂಗೋಪನೆ ಇಲಾಖೆ ಸಂಬಂಧಿಸಿದ ಹಲವು ಸಂಘಟನೆಗಳ ಸಹಭಾಗಿತ್ವದಲ್ಲಿ ಶಿಬಿರ ಅಯೋಜನೆ ಮಾಡಲಾಗಿತ್ತು. ದೊಡ್ಡರಾಯಪ್ಪನಹಳ್ಳಿ ಮತ್ತು ಸುತ್ತಮುತ್ತಲಿನ 150ಕ್ಕೂ ಅಧಿಕ ರಾಸುಗಳ ಆರೋಗ್ಯ ತಪಾಸಣೆ ಮಾಡಲಾಯಿತು.

ರೈತರನ್ನ ಉದ್ದೇಶಿಸಿ ಮಾತನಾಡಿದ ಕೃಷಿ ವಿಜ್ಞಾನಿ ಡಾ.ವೆಂಕಟೇಗೌಡರು, ಹಾಲಿನ ಉತ್ಪಾದನೆ ಹೆಚ್ಚಿಸುವುದರಿಂದ ರೈತರು ಹೆಚ್ಚಿನ ಆದಾಯ ಗಳಿಸಬಹುದು, ಕ್ಯಾಲ್ಸಿಯಂ ಮತ್ತು ಮಿನರಲ್ಸ್ ಇರುವ ನ್ಯೂಟ್ರಿಷನ್ ಆಹಾರವನ್ನ ಹಸುಗಳಿಗೆ ಕೊಡಬೇಕು. ಸೀಮೆ ಹುಲ್ಲಿನ ಜೊತೆ ದ್ವಿದಳ ಧಾನ್ಯಗಳ ಹುಲ್ಲನ್ನು ಕೊಡಬೇಕು. ಇದರ ಜೊತೆ ಅಜೋಲವನ್ನ ಕೊಡಬೇಕು. ಹಸುಗಳು ಕೊಡುವ ಹಾಲಿನ
ಪ್ರಮಾಣಕ್ಕೆ ತಕ್ಕಂತೆ ಪ್ರೋಟಿನ್ ಯುಕ್ತ ಆಹಾರವನ್ನ ಕೊಡುವುದರಿಂದ ಹಸುವಿನ ಹಾಲಿನಲ್ಲಿ ಫ್ಯಾಟ್ (ಡಿಗ್ರಿ)
ಹೆಚ್ಚಾಗುವುದಾಗಿ ಹೇಳಿದರು.

ಮಾಧ್ಯಮ ಮಿತ್ರರು ಆಗಮಿಸಿ ಕಾರ್ಯಕ್ರಮ ಯಶಸ್ವಿಯಾಗಲು ಸಾಕ್ಷಿಯಾದರು.

Leave a comment

Leave a Reply

Discover more from DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU - 560065

Subscribe now to keep reading and get access to the full archive.

Continue reading