1.ಸಂಪರ್ಕ ಹಾಗೂ ವವಸ್ಥಿತ ಕೀಟ/ರೋಗನಾಶಕ
ಸಂಪರ್ಕ ಹಾಗೂ ವ್ಯವಸ್ಥಿತ ಕೀಟ/ರೋಗನಾಶಕಗಳು ಯಾವ ರೀತಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಸಲಾಯಿತು.ಅದರ ಜೊತೆಗೆ ಯಾವ ಕೀಟಕ್ಕೆ ಯಾವ ವಿಧದ ಔಷಧಿಯನ್ನು ಸಿಂಪಡಿಸಬೇಕು ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು.


2.ಕೀಟನಾಶಕಗಳ ಮೇಲಿನ ಸುರಕ್ಷತಾ ಚಿಹ್ನೆಗಳು.
ಕೆಂಪು – ಅತ್ಯಂತ ವಿಷಕಾರಿ
ಹಳದಿ – ಅತಿ ವಿಷಕಾರಿ. ನೀಲಿ – ಸಾಧಾರಣ ವಿಷಕಾರಿ. ಹಸಿರು – ಕೊಂಚ ವಿಷಕಾರಿ.
ಈ ಸೂಚನೆಗಳ ಕುರಿತಾಗಿ ಜನರಿಗೆ ಮಾಹಿತಿ ನೀಡಲಾಯಿತು.




3.ವಿವಿಧ ಬೆಳೆಗಳಲ್ಲಿ ವಿವಿಧ ಕೀಟನಾಶಕಗಳ ಸುರಕ್ಷತಾ ಅವಧಿ.
ಸಿಂಪಡಣೆ ಹಾಗೂ ಮೊದಲ ಕಟಾವಿನ ನಡುವೆ ಎಷ್ಟು ಅಂತರವಿರಬೇಕು ಎಂಬುದನ್ನು ಸುರಕ್ಷತಾ ಅವಧಿ ಎನ್ನಲಾಗುತ್ತದೆ.ಇದು ವಿವಿಧ ಬೆಳೆಗಳಿಗೆ ವಿಭಿನ್ನ ವಾಗಿರುತ್ತದೆ.


