1/11/23
ದೊಡ್ಡರಾಯಪ್ಪನಹಳ್ಳಿಯ ನಂಜೇಗೌಡರ ದ್ರಾಕ್ಷಿ ತೋಟಕ್ಕೆ ಭೇಟಿ ನೀಡಿ ಅಲ್ಲಿ ರಸ್ಟ್,ಬೂದು ರೋಗಗಳ ಗುಣಲಕ್ಷಗಳನ್ನು ಗಮನಿಸಿದೆವು.ದ್ರಾಕ್ಷಿ ಬೆಳೆಯ ಕುರಿತಾದ ಮಾಹಿತಿಯನ್ನು ಪಡೆದುಕೊಂಡೆವು.



ಕುರಿ ಸಾಕಾಣಿಕೆಯಲ್ಲಿ ಸ್ಟಾಲ್ ಫೀಡಿಂಗ್ ಅನ್ನು ಗಮನಿಸಿ ಅದರಿಂದಾಗುವ ಪ್ರಯೋಜನಗಳನ್ನು ತಿಳಿದುಕೊಂಡೆವು.



2/11/23
ಹರ್ಷಿತ್ ರವರ ದಾಳಿಂಬೆ ತೋಟಕ್ಕೆ ಭೇಟಿ ನೀಡಿ ಅಲ್ಲಿ ಸಮರುವಿಕೆಯನ್ನು ಗಮನಿಸಿದೆವು.ಸಮರುವಿಕೆಯನ್ನು ಮಾಡುವಾಗ ಸಾಮಾನ್ಯ ರೆಂಬೆ ಹಾಗೂ ವಾಟರ್ ಶೂಟ್ ಗಳನ್ನು ಗುರುತಿಸಿ ವಾಟರ್ ಶೂಟ್ ಗಳನ್ನು ಮಾತ್ರ ಸಮರಬೇಕು. ವಾಟರ್ ಶೂಟ್ ಸಾಮಾನ್ಯ ರೆಂಬೆ ಗಿಂತ ತೆಳುವಾಗಿರುತ್ತವೆ ಹಾಗೂ ಬೇರಿನ ಹತ್ತಿರವಿರುತ್ತವೆ.ಹಾಗೆಯೇ ಅದರಲ್ಲಿನ ಎಲೆಗಳು ಬೇರೆ ಎಲೆಗಳಿಗಿಂತ ಚಿಕ್ಕದಾಗಿರುತ್ತವೆ.
ದಾಳಿಂಬೆಯಲ್ಲಿ ತ್ರಿಪ್ಸ್ ಕೀಟದ ಹಾನಿಯನ್ನು ಗಮನಿಸಿದೆವು ಹಾಗೂ ಸಮಗ್ರ ಕೀಟ ನಿರ್ವಹಣೆಯನ್ನು ಪಾಲಿಸಲು ಸೂಚಿಸಿದೆವು.
ದಾಳಿಂಬೆಯಲ್ಲಿ ಸನ್ ಬರ್ನ್.ಇದು ಒಂದು ಶಾರೀರಿಕ ಅಸ್ವಸ್ಥತೆ.ತಾಪಮಾನ 45°C ಗಿಂತ ಹೆಚ್ಚಾದಾಗ ಸನ್ ಬರ್ನ್ ಅನ್ನು ಕಾಣಬಹುದು. ಇದಕ್ಕಾಗಿ ಕಯೋಲಿನ್ ಸ್ಪ್ರೇ ಸೂಚಿಸಿದೆವು.
