ಕೊಳವೆ ಬಾವಿ ಜಲ ಮರುಪೂರಣ

ರಾಜ್ಯದಲ್ಲಿ ಲಕ್ಷಾಂತರ ಕೊಳವೆ ಬಾವಿಗಳಿವೆ. ಅವುಗಳಲ್ಲಿ ಬಹಳಷ್ಟು ಬತ್ತಿವೆ. ಕೊಳವೆ ಬಾವಿ ನಮ್ಮದಾದರೂ, ಅದರಲ್ಲಿರುವ ನೀರು ಮಾತ್ರ ಎಲ್ಲರಿಗೂ ಸೇರಿದ್ದು, ಕೊಳವೆ ಬಾವಿಯಿಂದ ನೀರು ತೆಗೆಯುವವರು ಮಳೆ ನೀರಿನ ಮೂಲಕ ಅದನ್ನು ಮರುಪೂರಣ ಮಾಡಬೇಕು.

ಜಲ ಮರುಪೂರಣಕ್ಕೆ ಬೇಕಾಗುವ ಸಾಮಗ್ರಿಗಳು

• ನೈಲಾನ್ ಪರದೆ

• ದಿಂಡು ಕಲ್ಲುಗಳು

• 40 ಮಿ.ಮೀ ಗಾತ್ರದ ಜೆಲ್ಲಿ (ದಪ್ಪ ಜೆಲ್ಲಿ)

•20 ಮಿ.ಮೀ ಗಾತ್ರದ ಬೇಬಿ ಜೆಲ್ಲಿ (ಸಣ್ಣ ಜೆಲ್ಲಿ)

•ಇದ್ದಲು

•ಮರಳು

ಜಲ ಮರುಪೂರಣ ವ್ಯವಸ್ಥೆ ಅಳವಡಿಸುವ ವಿಧಾನ

• ಕಡಿಮೆ ನೀರಿನ ಇಳುವರಿಯ ಅಥವಾ ಸಂಪೂರ್ಣವಾಗಿ ಬತ್ತಿರುವ ಕೊಳವೆ ಬಾವಿ ಆಯ್ಕೆ ಮಾಡಿಕೊಂಡು 3 ಮೀ. ಉದ್ದ, 3 ಮೀ ಅಗಲ, 3 ಮೀ ಆಳದ ಇಂಗು ಗುಂಡಿಯನ್ನು ಕೊಳವೆ ಬಾವಿ ಸುತ್ತ 27 ಘನ ಮೀ. ತೆಗೆಯುವುದು.

• ತಳದಿಂದ ಒಂದು ಮೀಟರ್ ಕೇಸಿಂಗ್ ಪೈಪ್‌ಗೆ ರಂಧ್ರಗಳನ್ನು ಮಾಡಿ ಅದಕ್ಕೆ ನೈಲಾನ್ ಪರದೆಯನ್ನು ಸುತ್ತಿ ಭದ್ರವಾಗಿ ಕಟ್ಟಿ, ನಂತರ ವಿವಿಧ ಬಸಿಯುವಿಕೆ ಮತ್ತು ಶುದ್ದೀಕರಣದ ಸಾಮಗ್ರಿಯನ್ನು ತುಂಬುವುದು.

• ಕೆಳಭಾಗದಿಂದ ದಪ್ಪನೆಯ ದಿಂಡು ಕಲ್ಲುಗಳನ್ನು 1.2 ಮೀ. ರವರೆಗೆ ತುಂಬಬೇಕು.

• ನಂತರ 40 ಮಿ.ಮೀ. ಗಾತ್ರದ ಜಲ್ಲಿ ಕಲ್ಲುಗಳನ್ನು 0.4 ಮೀಟರ್ ವರೆಗೆ ಹಾಗೂ 20 ಮಿ.ಮೀ ಗಾತ್ರದ ಜಲ್ಲಿ ಕಲ್ಲುಗಳನ್ನು 0.4 ಮೀಟ‌ರ್ ವರೆಗೆ ತುಂಬುವುದು.

• ನೀರಿನ ಶುದ್ದೀಕರಣಕ್ಕಾಗಿ ಇದ್ದಲು 0.1 ಮೀಟರ್ ಮತ್ತು ಮರಳು 0.7 ಮೀಟರ್ ಪದರವಾಗಿ ತುಂಬಬೇಕು.

• ಮರುಪೂರಣ ಸಾಮಗ್ರಿಗಳನ್ನು ಇಂಗು ಗುಂಡಿಗೆ ತುಂಬಿದ ಮೇಲೆ ಇಂಗು ಗುಂಡಿ ಸುತ್ತಲೂ ಕಲ್ಲುಗಳಿಂದ ಗೋಡೆ ನಿರ್ಮಿಸಿ ಸಿಮೆಂಟ್ ಕಾಂಕ್ರೀಟ್‌ನಿಂದ ಭದ್ರಗೊಳಿಸಿದರೆ ಇಂಗು ಗುಂಡಿಗೆ ಹರಿದುಬರುವ ಮಳೆ ನೀರು ನಿಲ್ಲುವುದಕ್ಕೆ ಅನುಕೂಲವಾಗುತ್ತದೆ.

• ಹರಿದು ಬರುವ ನೀರನ್ನು ಕಾಲುವೆ ಮೂಲಕ ಇಂಗು ಗುಂಡಿಯ ತೊಟ್ಟಿಗೆ ಹರಿಸಬೇಕು. ಗುಂಡಿಯಲ್ಲಿ ಸಂಗ್ರಹವಾದ ನೀರು ನಿಧಾನವಾಗಿ ಶೋಧಿಸಲ್ಪಟ್ಟು ಕೇಸಿಂಗ್ ಪೈಪ್ ಮುಖಾಂತರ ಒಳಹೊಕ್ಕು ನೀರಿನ ಸೆಲೆಯನ್ನು ಸೇರಿ ಅಂತರ್ಜಲದ ಮಟ್ಟ ಹೆಚ್ಚಿಸಲು ಸಹಕಾರಿಯಾಗುತ್ತದೆ.

• ಮರು ಪೂರಣ ಮಾಡಿದ ಮೇಲೆ ನೀರಿನ ಇಳುವರಿಯು ಆ ಪದೇಶದಲ್ಲಿ ಬಿದ್ದ ಮಳೆ ಹಾಗೂ ನೀರನ್ನು ಇಂಗಿಸಿದ ಣದ ಮೇಲೆ ನಿರ್ಧಾರವಾಗುತ್ತದೆ.

ಈ ವಿಷಯದ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು.ಅದೇ ರೀತಿ ಕೊಳವೆ ಬಾವಿ ಜಲ ಮರುಪೂರಣ ಮಾಡುವ ವಿಧಾನವನ್ನು ತಿಳಿಸಿ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು.

Leave a comment

Leave a Reply

Discover more from DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU - 560065

Subscribe now to keep reading and get access to the full archive.

Continue reading