Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

Chikkonahalli

ಚಿಕ್ಕೋನಹಳ್ಳಿ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ವಿದ್ಯಾರ್ಥಿಗಳು ಇಡಿಎಫ್ ಮತ್ತು ರೈತ ಉತ್ಪಾದಕ ಕಂಪನಿ ಹುಲಿಯೂರುದುರ್ಗ ಇವರ ಸಹಭಾಗಿತ್ವದೊಂದಿಗೆ ರೈತರ ಜಮೀನಿನಲ್ಲಿ ಜೀವಾಮೃತ ತಯಾರಿಸುವ ವಿಧಾನದ ಬಗ್ಗೆ ತಿಳಿಸಿಕೊಟ್ಟರು ಮತ್ತು ಸ್ಥಳದಲ್ಲಿಯೇ 50 ಲೀಟರ್ ಜೀವಾಮೃತವನ್ನು ತಯಾರಿಸಲಾಯಿತು.

ಚಿಕ್ಕೋನಹಳ್ಳಿ ಗ್ರಾಮದಲ್ಲಿ ರೈತರ ಸಭೆ ನಡೆಸಲಾಯಿತು.
ವಿಷಯಗಳು:

ರೈತ ಉತ್ಪಾದನಾ ಸಂಸ್ಥೆ

ಕನಿಷ್ಠ ಬೆಂಬಲ ಯೋಜನೆ

ಫಸಲ್ ಬಿಮಾ ಯೋಜನೆ

ರೈತರು ತಮ್ಮ ಹೋಬಳಿ ಮಟ್ಟದ ಇತರೆ ಪ್ರಗತಿಪರ ರೈತರನ್ನು ಒಗ್ಗೂಡಿಸಿ ಒಂದು ರೈತ ಉತ್ಪಾದನಾ ಸಂಸ್ಥೆಯನ್ನು ನೋಂದಾಯಿಸಲು ಆಸಕ್ತಿ ತೋರಿಸಿದ್ದಾರೆ.
ಮುಂದಿನ ದಿನಗಳಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವದ ವಿದ್ಯಾರ್ಥಿಗಳ ನೆರವಿನೊಂದಿಗೆ ಒಂದು ರೈತರ ಉತ್ಪಾದನಾ ಸಂಸ್ಥೆಯನ್ನು ಕಟ್ಟುವುದಾಗಿ ಊರಿನ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದರು.

ಚಿಕ್ಕೋನಹಳ್ಳಿ ಯಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರ

ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಅಂತಿಮ ವರ್ಷದ ಬಿಎಸ್ಸಿ ಕೃಷಿ ವಿದ್ಯಾರ್ಥಿ ಗಳ ವತಿಯಿಂದ ಕುಣಿಗಲ್ ತಾಲೂಕ್ ಹುಲಿಯೂರುದುರ್ಗ ಹೋಬಳಿ ಚೌಡನಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಉಚಿತ ಮಣ್ಣು ಪರೀಕ್ಷಾ ಶಿಬಿರವನ್ನು ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಚೌಡನಕುಪ್ಪೆ, ನೀಲಸಂದ್ರ ,ಹೇರೋಹಳ್ಳಿ ಗ್ರಾಮದ ರೈತರನ್ನು ಒಳಗೊಂಡಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರಗಳು ಉಪಸ್ಥಿತರಿದ್ದರು. ಕೃಷಿ ವಿದ್ಯಾರ್ಥಿಗಳು ಖುದ್ದಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ನೂರಕ್ಕೂ ಹೆಚ್ಚು ಮಣ್ಣಿನ ಮಾದರಿಗಳನ್ನು ಸಂಗ್ರಹ ಮಾಡಿದ್ದರು. ಕೃಷಿ ವಿಸ್ತರಣೆ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾಕ್ಟರ್ ಶಿವಲಿಂಗಯ್ಯನವರು ಮಾತನಾಡಿ ತೆಂಗಿನಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಮಾಡುವುದು ಅತ್ಯಗತ್ಯ ಎಂದು ಹೇಳಿದರು. ಮಣ್ಣು ವಿಜ್ಞಾನಿಗಳಾದ ಡಾಕ್ಟರ್ ಸತೀಶ್ ಅವರು ಮಾತನಾಡಿ ರಾಸಾಯನಿಕ ಗೊಬ್ಬರಗಳ ಕಲಬೆರಿಕೆಗಳನ್ನು ಕಂಡುಹಿದಿಯುವ ಬಗ್ಗೆ ತಿಳಿಸಿದರು. ಕೃಷಿ ವಿದ್ಯಾರ್ಥಿ ತೇಜಸ್ ಹೆಚ್.ಎನ್ ಮಾತನಾಡಿ ಮುಂದಿನ ದಿನಗಳಲ್ಲಿ ರೈತರಿಗೆ ವಿಶ್ವವಿದ್ಯಾನಿಲಯದ ವತಿಯಿಂದ ಉಚಿತವಾಗಿ ಮಣ್ಣಿನ ಆರೋಗ್ಯ ಚೀಟಿಗಳನ್ನು ವಿತರಿಸುವುದಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು ಮತ್ತು ಕಾರ್ಯಕ್ರಮದಲ್ಲಿ ಕೃಷಿಗೆ ಸಂಬಂಧಿಸಿದ ಮಳಿಗೆಗಳನ್ನು ಹಾಕಲಾಗಿತ್ತು. ವಿಜ್ಞಾನಿಗಳು ಮತ್ತು ರೈತರ ಮಧ್ಯೆ ವಿಚಾರ ವಿನಿಮಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಮತ್ತು ಈ ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರದ ಡಾ. ಮುತ್ತೆಪ್ಪ ಚಿಗಡೊಳ್ಳಿ, ಡಾಕ್ಟರ್ ಲಕ್ಷ್ಮಿಪತಿ, ಡಾ. ಸೈಯದ್ ರಿಜ್ವಾನ್ ಅಹ್ಮದ್, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೃಷ್ಣೆಗೌಡ ಗ್ರಾ.ಪಂ.ಸದಸ್ಯ ಚೆಲುವಯ್ಯ ಗ್ರಾಮಸ್ಥರಾದ ಸದಾಶಿವಯ್ಯ, ಮಹೇಶ್ ಸಿ, ಭದ್ರಯ್ಯ,ನಿತ್ಯಣ್ಣ,ಪ್ರಭುಶಂಕರ್,ಮಂಜಣ್ಣ,ರವಿಕುಮಾರ್, ಮುಂತಾದವರು ಉಪಸ್ಥಿತರಿದ್ದರು.

Agroindustrial Attachements | RAWE 2024-25 GKVK | Hassan | Chintamani | Mandya | Chamarajanagara | Weekly Activities
Cluster 1 : 1. Shettigere | 2.Balakuntahalli | 3. Avalagurki
Cluster 2 : 4.Bhaktarahalli | 5.Gunnagare | 6.Huccha Hanume Gowdanpalya
Cluster 3: 7.Swandenahalli | 8.Bommanahalli | 9.Haraluru
Cluster 4: 10.Antharahalli | 11.Koluru | 12.Palpaldinne
Cluster 5: 13.Thatvalu | 14.Ippadi | 15.Chikkonahalli
Newsletters | Teachers | Students | Night Meetings | Gramasabha | PRA | Media Coverage | Youtube | FPTD Park Technologies | Seed Kit | Experiences | Soil Tesing | Teachers Visit Report| RAWE Report Format | Villages Leaders Location | IBTVA Trainings | Animal Health Campaigns | Manual | Declaration Form | KKISAN | Parthenium Week | Scheduled Visits | Student Allotment | Schedule A | Schedule B | Dummy Tables | Orientation | Group Leaders | Coordinators | Transport | Schedule of Events | Exhibitions | Trainings | Notifications |Demonstrations | Feedbak | Video Conferencing | Input Agencies Programmes | Diagnostic Visits | Fodder Bank | Bakery Demos | Vanamahothsava
RAWE Activities : August 12|13|14|15|16|17|18|19|20|21|22|23|24|25|26|27|28|29|30|31 September 1|2|3|4|5|6|7|8|9|10|11|12|13|14|15|16| 17 | 18 | 19 | 20| 21| 22| 23| 24| 25| 26| 27|28|29|30| October 1|2|3|4|5|6|7|8|9|10|11|12|13|14|15|16|17|18|19|20|21|22|23|24|25| 26|27|28|29|30|31 November 1|2|3|4|5|6|7|8|9|10|11|
Exit mobile version