ದೊಡ್ಡರಾಯಪ್ಪನಹಳ್ಳಿಯ ಗ್ರಾಮಸಭೆ

ಕೃಷಿ ವಿಶ್ವವಿದ್ಯಾನಿಲಯ ಮತ್ತು ಕೃಷಿ ಇಲಾಖೆಯ ಅಡಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮಕ್ಕೆ ಬಿಎಸ್ಸಿ ಕೃಷಿ ಅಂತಿಮ ವರ್ಷದ ವಿದ್ಯಾರ್ಥಿಗಳು ಶಿಬಿರಾರ್ಥಗಳಾಗಿ ದೊಡ್ಡರಾಯಪ್ಪನಹಳ್ಳಿಗೆ ಆಗಮಿಸಿರುತ್ತಾರೆ.ಗ್ರಾಮೀಣ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳಲು ಹಾಗು ರೈತರು ಎದುರಿಸುವ ಸಮಸ್ಯೆಗಳನ್ನು ಅರಿತುಕೊಳ್ಳುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಗ್ರಾಮಸಭೆಯಲ್ಲಿ ಶಿಬಿರಾರ್ಥಿಗಳು ತಾವು ಬಂದಿರುವ ಉದ್ದೇಶವನ್ನು ತಿಳಿಸಿ ಗ್ರಾಮಸ್ಥರಲ್ಲಿ ಸಹಕಾರ ಕೋರಿದರು.ದೊಡ್ಡಬಳ್ಳಾಪುರ – ರೈತ ಸಂಪರ್ಕ ಕೇಂದ್ರದ
ಕೃಷಿ ಅಧಿಕಾರಿಯಾದ ನವೀನ ಕುಮಾ‌ರವರು ಪಾಲ್ಗೊಂಡಿದ್ದರು. ಪ್ರಸ್ತುತದಲ್ಲಿ ಕೃಷಿಯು ಕೃಷಿ ವ್ಯವಹಾರವಾಗಿ ಪರಿವರ್ತನೆಯಾಗಿದೆ.ರೈತರು ಸಾಂಪ್ರದಾಯಿಕ ಕೃಷಿಯನ್ನು ತ್ಯಜಿಸಿ ರೈತರು ಸಾಂದ್ರೀಕೃತ ಬೇಸಾಯಕ್ಕೆ ಮೊರೆಯೋಗಿದ್ದಾರೆ.ಇದರಿಂದ ಪರಿಸರ ವೈವಿಧ್ಯತೆಗೆ ತೊಂದರೆಯಾಗಿದೆ ಎಂದು ಅಭಿಪ್ರಾಯಪಟ್ಟರು – ಸರ್ಕಾರಿ ಕೃಷಿ ಸಂಬಂಧಿತ ಇಲಾಖೆಯೊಂದಿಗೆ ಸಂಪರ್ಕವನ್ನಿಟ್ಟುಕೊಳ್ಳಲು ಪ್ರೇರೇಪಿಸಿದರು . ಶಿಬಿರಾರ್ಥಿಗಳಗೆ ರೈತರೊಂದಿಗೆ ಬಾಂಧವ್ಯ ಬೆಳೆಸಿ, ಅವರೊಂದಿಗೆ ಸೇರಿ ಕಲಿಯಲು ಸಲಹೆ ನೀಡಿದರು.ರೈತ ಮುಖಂಡರಾದ ಬಸವರಾಜಪ್ಪ, ಚೊಕ್ಕರೆಡ್ಡಿ ,ಶ್ವೇತಾ ಮುನಿಸ್ವಾಮಿಗೌಡ, ರಾಮು, ರಾಜಶೇಖರ್ ಮುಂತಾದವರು ಭಾಗವಹಿಸಿದ್ದರು.

https://www.instagram.com/reel/CzNfFffLwBz/?igshid=MzRlODBiNWFlZA==

Leave a comment

Leave a Reply

Discover more from DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU - 560065

Subscribe now to keep reading and get access to the full archive.

Continue reading