



ಗಾಂಧಿ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ಬಿ .ಎಸ್ .ಸಿ ವಿದ್ಯಾರ್ಥಿಗಳಿಂದ ಚಿಕ್ಕಬಳ್ಳಾಪುರ ತಾಲೂಕು ಮತ್ತು ಜಿಲ್ಲೆ ಕಸಬಾ ಹೋಬಳಿ ಆವಲಗುರ್ಕಿ ಗ್ರಾಮದಲ್ಲಿ ಜೈವಿಕ ಇಂಧನ ನಡೆತೋಪು ಕಾರ್ಯಕ್ರಮ ಮಂಗಳವಾರ ನಡೆಯಿತು
ಕಾರ್ಯಕ್ರಮದಲ್ಲಿ ಅವಲಗುರ್ಕಿ ಗ್ರಾಮದ ರೈತರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ವನಜಾಕ್ಷಿ ಹಾಗೂ ಜೈವಿಕ ಇಂಧನ ಘಟಕದ ಚಿಂತಾಮಣಿಯ ಸಹ ಪ್ರಾಧ್ಯಾಪಕರಾದ ಡಾಕ್ಟರ್ ವೆಂಕಟೇಶಪ್ಪ ಸಹ ಪ್ರಾಧ್ಯಾಪಕರು ಭಾಗಿಯಾಗಿದ್ದರು
ಕಾರ್ಯಕ್ರಮಕ್ಕೆ ಸಸಿಯನ್ನು ನಡೆಯುವುದರ ಮೂಲಕ ಚಾಲನೆ ನೀಡಿದ ಡಾ|| ವೆಂಕಟೇಶಪ್ಪನವರು ಮಾತನಾಡಿ “ಸಸ್ಯ ಬೀಜಗಳು ಕೃಷಿ ತಾಜ್ಯ ಪ್ರಾಣಿಗಳ ಕೊಬ್ಬು ಆಮ್ಲಜನಕ ರಹಿತ ಜೀರ್ಣಕ್ರಿಯೆ ಮೊದಲ ಮೊದಲಾದವುಗಳಿಂದ ಪಡೆದ ಇಂಧನವನ್ನು ಜೈವಿಕ ಇಂಧನ” ಎಂದು ಹೇಳುತ್ತಾರೆ ಇಂದಿನ ನಾಗರಿಕ ಬದುಕಿನ ಮೂಲಾಧರ ಮನುಷ್ಯನ ದುರಾಸೆಯಿಂದ ನೈಸರ್ಗಿಕ ಇಂಧನಗಳಾದ ಪೆಟ್ರೋಲ್, ಡೀಸೆಲ್ ಇಂಧನಗಳು ಮುಗಿಯುತ್ತಾ ಭೂಮಿಯ ಅಸ್ತಿತ್ವದ್ದಕ್ಕೆ ಎನ್ನಲಾಯಿತು. ಜೈವಿಕ ಇಂಧನದ ಮರಗಳನ್ನು ಬೆಳೆಯುದರಿಂದ ಮಣ್ಣಿನ ಫಲ ಪತ್ತತೆಯನ್ನು ಮಾಡಿಕೊಳ್ಳಬಹುದು ಮತ್ತು ಜೈವಿಕ ಇಂಧನವನ್ನು ನವೀಕರಿಸಬಹುದೆಂದು ಹೇಳಿದರು. ಕೊನೆಯದಾಗಿ ಭೂಮಿಯ ಉಳಿವಿಗೆ ಜೈವಿಕ ಇಂಧನದ ಸಸಿಗಳನ್ನು ನಡೆಯುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು.Honda motor trading pvt.ltd,CSR fund ನಡೆತೋಪು ಕಾರ್ಯಕ್ರಮ ಅನುದಾನಿತ ಪ್ರಯೋಜನ ದಡಿಯಲ್ಲಿ ಉಚಿತ ಜೈವಿಕ ಇಂಧನ ಸಸಿಗಳನ್ನು ರೈತರಿಗೆ ವಿತರಿಸಲಾಯಿತು…
