ANIMAL HEALTH CAMP – IBASAPURA

ಕೃಷಿ ಇಲಾಖೆ ಕರ್ನಾಟಕ ಸರ್ಕಾರ, ಇವರ ಸಂಯುಕ್ತ ಆಶ್ರಯದಲ್ಲಿ ಅಂತಿಮ ವರ್ಷದ ಬಿ.ಎಸ್ಸಿ (ಆನರ್ಸ್) ಕೃಷಿ ಹಾಗೂ ಬಿ.ಎಸ್ಸಿ ಕೃಷಿ ವ್ಯವಹಾರ ನಿರ್ವಹಣೆ ವಿದ್ಯಾರ್ಥಿಗಳು ಸ್ಟೂಡೆಂಟ್ ರೆಡಿ ಕಾರ್ಯಕ್ರಮದಡಿಯ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮದಡಿ ದೇವನಹಳ್ಳಿ ತಾಲೂಕಿನ ಐಬಸಾಪುರ ಗ್ರಾಮದಲ್ಲಿ ಬರಡು ರಾಸುಗಳ ತಪಾಸಣಾ ಶಿಬಿರ ಕರುಗಳ ಪ್ರದರ್ಶನ ಮತ್ತು ಉಚಿತ ಪಶು ಆರೋಗ್ಯ ಶಿಬಿರವು ನಡೆಯಿತು.

ಪಶುಗಳ ತಪಾಸಣೆಯನ್ನು ತಪಾಸಣ ತಜ್ಞರಾದ ಡಾ. ಸುಚಿತ್ರ ಡಾ.ಮುತ್ತುರಾಜ್ ಡಾ. ಅನೂಪ್ ಮಾಡಿದರು. ರೋಗಗಳಾದ ಮಂಗೆ ಅಲರ್ಜಿ ಮುಂತಾದವುಗಳಿಗೆ ಸೂಜಿಯ ಮೂಲಕ ಔಷಧಿ ನೀಡಲಾಯಿತು. ಜಂತುಹುಳಕ್ಕೆ ಔಷಧಿ ನೀಡಿ ಗರ್ಭ ಧರಿಸಿದ ರಾಸುಗಳಿಗೆ ಸ್ಕ್ಯಾನಿಂಗ್ ಯಂತ್ರದ ಮೂಲಕ ತಪಾಸಣೆ ಮಾಡಲಾಯಿತು

ಔಷಧಿಗಳು- Ivermectin, CPM, B complex, Debility

Intas, KAAPL ಮತ್ತು Ayurmet ಸಂಸ್ಥೆಗಳ ಮೂಲಕ ಔಷಧಿ ಮತ್ತು ಮಿನರಲ್ ಮಿಕ್ಸ್ಚರ್ ಉಚಿತವಾಗಿ ವಿತರಿಸಲಾಯಿತು

ಕರುಗಳ ಪ್ರದರ್ಶನದ ತೀರ್ಪನ್ನು ಡಾಕ್ಟರ್ ಕಾವ್ಯ ಡಾ. ಕಾಂತರಾಜ್ ಡಾಕ್ಟರ್ ಪ್ರದೀಪ್ ಡಾಕ್ಟರ್ ರಾಜೇಶ್ ಮಾಡಿದರು 0- 3 ತಿಂಗಳುಗಳ ಕರುಗಳು 4-6 ತಿಂಗಳು ಮತ್ತು 7-9 ತಿಂಗಳು ಕರುಗಳಿಗೆ ಬಹುಮಾನ ನೀಡಲಾಯಿತು ಬಹುಮಾನಗಳು ಮತ್ತು ಸಮಾಧಾನಕರ ಬಹುಮಾನಗಳನ್ನು ಭಾಗವಹಿಸಿದ ಎಲ್ಲಾ ಕರುಗಳಿಗೆ ನೀಡಲಾಯಿತು.

ಸುಮಾರು 120 ಹಸುಗಳ ತಪಾಸಣೆ ಮತ್ತು 30 ಕರುಗಳ ಪ್ರದರ್ಶನ ನಡೆಯಿತು.

ಹಸುಗಳ ತಳಿಗಳ ಪ್ರದರ್ಶನ
ಹಸು – ಎಚ್. ಎಫ್, ಮಲೆನಾಡು ಗಿಡ್ಡ, ಜೆರ್ಸಿ,
ಕುರಿ – ಬನ್ನೂರು
ಮೇಕೆ – ನಾಟಿ ಮತ್ತು ಜಮುನಾಪಾರಿ
ಕೋಳಿ – ಕಡಕ್ನಾಥ್, ಟರ್ಕಿ, ಲೇಘೋರ್ನ್,
ಮೊಲ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಜಗದೀಶ್ ಕುಮಾರ್ (Deputy director) ಬೆಂಗಳೂರು ಗ್ರಾ.ಜಿಲ್ಲೆ
ಡಾ.ಅನಿಲ್ ಕುಮಾರ್ ಮುಖ್ಯ ವೈದ್ಯಾಧಿಕಾರಿಗಳು ದೇವನಹಳ್ಳಿ ಪಶು ಆಸ್ಪತ್ರೆ
ಡಾ. ಆನಂದ್ ಮನೆಗಾರ್ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು
ಡಾ. ಸವಿತ , RAWE ಉಪ ಸಂಯೋಜಕರು, ಕೃಷಿ ವಿಸ್ತರಣಾ ವಿಭಾಗ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು.
ಶ್ರೀ.ಬಿ.ಶ್ರೀನಿವಾಸ್ , ಅಧ್ಯಕ್ಷರು ಕೆಎಂಎಫ್ ದೇವನಹಳ್ಳಿ
ಶ್ರೀಮತಿ ನಾಗಮಣಿ ಮಂಜುನಾಥ್ ಗ್ರಾಮ ಪಂಚಾಯತಿ ಅಧ್ಯಕ್ಷರು,
ಎಂಪಿಸಿಎಸ್ ಅಧ್ಯಕ್ಷರು ಮತ್ತು ನಿರ್ದೇಶಕರು,
ಡಾ. ಸುಚಿತ್ರ, ವೆಟರ್ನರಿ ಕಾಲೇಜು ಹೆಬ್ಬಾಳ ,
ಡಾ. ಮುತ್ತುರಾಜ್, ಪಶು ವೈದ್ಯಾಧಿಕಾರಿಗಳು ಐಬಸಾಪುರ,
ಡಾ. ಅನೂಪ್ ಕುಮಾರ್ ,
ಶ್ರೀ ಮರುಳ ಸಿದ್ದಪ್ಪ ಮತ್ತು ಊರಿನ ರೈತರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Videos of the Program

Leave a comment

Leave a Reply

Discover more from DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU - 560065

Subscribe now to keep reading and get access to the full archive.

Continue reading