ಜಿಕೆವಿಕೆ ವಿದ್ಯಾರ್ಥಿಗಳಿಂದ ಚಿಕ್ಕೋನಹಳ್ಳಿ ಯಲ್ಲಿ ರೈತರ ಸಭೆ.

Farmers Meet at Chikkonahalli

ಜಿಕೆವಿಕೆ ವಿದ್ಯಾರ್ಥಿಗಳಿಂದ ಚಿಕ್ಕೋನಹಳ್ಳಿ ಯಲ್ಲಿ ರೈತರ ಸಭೆ.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಜಿಕೆವಿಕೆ ಅಲ್ಲಿ ಅಂತಿಮ ವರ್ಷದ ಬಿಎಸ್ಸಿ ಕೃಷಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕು ಹುಲಿಯೂರುದುರ್ಗ ಹೋಬಳಿ ಚಿಕ್ಕೋನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ ಅಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.ಮುಂದಿನ ಮೂರು ತಿಂಗಳುಗಳ ಕಾಲ ಗ್ರಾಮದಲ್ಲಿ ಇರಲಿದ್ದಾರೆ.ಭಾನುವಾರ ಸಂಜೆ ಗ್ರಾಮದ ಬಸವಣ್ಣ ನ ದೇವಸ್ಥಾನದ ಬಳಿ ಗ್ರಾಮದ ಜನರನ್ನು ಉದ್ದೇಶಿಸಿ ಸಭೆಯನ್ನು ಮಾಡಲಾಯಿತು,ಸಭೆಯಲ್ಲಿ ಹೇರೋಹಳ್ಳಿ,ಚೌಡನಕುಪ್ಪೆ,ನೀಲಸಂದ್ರ,ಬ್ಯಾಡರಹಳ್ಳಿ ಗ್ರಾಮದ ರೈತರು ಉಪಸ್ಥಿತರಿದ್ದರು,ವಿದ್ಯಾರ್ಥಿಗಳು ಮಾತನಾಡಿ ಬಿಎಸ್ಸಿ ಕೃಷಿ ಪದವಿ,ಕೃಷಿ ವ್ಯವಹಾರ ನಿರ್ವಹಣೆ ಪದವಿಯ ಬಗ್ಗೆ ವಿವರಿಸಿದರು,ರೈತರಿಂದ ಮಾಹಿತಿ ಸಂಗ್ರಹಿಸಿ ಸಮಸ್ಯೆಗಳನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ವಿವಿಧ ವಿಸ್ತರಣ ಚಟುವಟಿಕೆಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು,ಮತ್ತು ಪ್ರತಿದಿನ ಇಬ್ಬರು ವಿದ್ಯಾರ್ಥಿಗಳು ಹುಲಿಯೂರುದುರ್ಗ ದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ರೈತರಿಗೆ ತಾಂತ್ರಿಕ ಮಾಹಿತಿಯನ್ನು ಒದಗಿಸುವುದಾಗಿ ತಿಳಿಸಿದರು.ಮುಂದಿನ ದಿನಗಳಲ್ಲಿ ರೈತರ ಜಮೀನಲ್ಲಿ ಮಣ್ಣು ಪರೀಕ್ಷೆ,ಬೀಜೋಪಚಾರ,ಎರೆಹುಳು ಗೊಬ್ಬರ ದ ಮಹತ್ವ,ಬೆಳೆಗಳಿಗೆ ಬೇಕಾಗಿರುವ ಪೋಷಕಾಂಶಗಳ ಮಹತ್ವ,ವಿವಿಧ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿ,ಸಮರ್ಪಕ ನೀರು ನಿರ್ವಹಣೆ,ಅಣಬೆ ಬೇಸಾಯ,ಜೇನುಕೃಷಿ,ಸಮಗ್ರ ಕೀಟ ನಿರ್ವಹಣೆ,ಸಮಗ್ರ ರೋಗ ನಿರ್ವಹಣೆ,ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ,ಕಟಾವಿನ ನಂತರ ದವಸ ಧಾನ್ಯಗಳಲ್ಲಿ ಪೀಡೆ ನಿರ್ವಹಣೆ, ಅಜೋಲಾ ಉತ್ಪಾದನೆ ಮತ್ತು ಇನ್ನೂ ಇತರೆ ವಿಷಯಗಳ ಬಗ್ಗೆ ಮಾಹಿತಿ ತಿಳಿಸಲಾಗುವುದು ಎಂದು ಹೇಳಿದರು.ನವೆಂಬರ್ ತಿಂಗಳಿನಲ್ಲಿ ಕೃಷಿ ವಸ್ತು ಪ್ರದರ್ಶನ ಮತ್ತು ವಿಜ್ಞಾನಿಗಳ ಹಾಗೂ ರೈತರ ವಿಚಾರ ಸಂಕಿರಣವನ್ನು ಆಯೋಜಿಸಲಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ರೈತರಿಗೆ ಮಾಹಿತಿ ಕೇಂದ್ರವನ್ನು ಸಹಾ ಸ್ಥಾಪಿಸುವುದಾಗಿ ತಿಳಿಸಿದರು.ಸ್ಥಳೀಯ ರೈತರು ಮಾತನಾಡಿ ವಿಶ್ವ ವಿದ್ಯಾಲಯವು ತಮ್ಮ ಗ್ರಾಮವನ್ನು ಆಯ್ಕೆ ಮಾಡಿರುವುದು ಸಂತಸದ ವಿಚಾರ ಎಂದು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.ಹಾಗೂ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಗ್ರಾಮಕ್ಕೆ ನಿರಂತರ ವಾಗಿ ಭೇಟಿ ನೀಡುವುದರಿಂದ ವಿಶ್ವ ವಿದ್ಯಾಲಯದ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಲು ಸಹಕಾರಿ ಆಗಿದೆ ಎಂದು ತಿಳಿಸಿದರು.

Published by Professor and Head

Professor and Head, Department of Agricultural Extension, College of Agriculture University of Agricultural Sciences, GKVK, Bengaluru.

Leave a comment

Leave a Reply

Discover more from DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU - 560065

Subscribe now to keep reading and get access to the full archive.

Continue reading