Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

ವಿಶ್ವ ಮಣ್ಣು ದಿನಾಚರಣೆ – 5/12/23 ದೊಡ್ಡರಾಯಪ್ಪನಹಳ್ಳಿ

ದೊಡ್ಡರಾಯಪ್ಪನಹಳ್ಳಿಯಲ್ಲಿ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಶಿಬಿರಾರ್ಥಿಗಳು ದಿನಾಂಕ 5/12/2023 ರಂದು ವಿಶ್ವ ಮಣ್ಣು ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಮಣ್ಣಿಗೆ ಪೂಜೆಗೈಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶಿಬಿರಾರ್ಥಿಗಳು ಮಣ್ಣು ಮತ್ತು ಜಲ ಸಂರಕ್ಷಣೆಯ ಕುರಿತಾಗಿ ಕಿರುನಾಟಕ ಪ್ರದರ್ಶಿಸಿ ರೈತ ಬಾಂಧವರಲ್ಲಿ ಜಾಗೃತಿ ಮೂಡಿಸಿದರು.

https:///storage/emulated/0/Download/Nearby Share/VID20231205190903.mp4


ಮಣ್ಣು ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲೆ ಸ್ಪರ್ಧೆಗಳಲ್ಲಿ ವಿಜೇತರಾದ ದೊಡ್ಡರಾಯಪ್ಪನಹಳ್ಳಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಗಣ್ಯರು ಹಾಗೂ ರೈತರು ಬಹುಮಾನಗಳನ್ನು ವಿತರಿಸಿದರು.

ಮಣ್ಣು ವಿಜ್ಞಾನಿಯಾದ ಡಾ. ಉಮೇಶ್ ರವರು ಮಣ್ಣಿನ ಮೌಲ್ಯ ಹಾಗೂ ಮಣ್ಣಿನ ಫಲವತ್ತತೆಯ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಿದರು.


ದೊಡ್ಡರಾಯಪ್ಪನಹಳ್ಳಿಯ ಪ್ರಗತಿಪರ ರೈತರಾದ ಚೊಕ್ಕ ರೆಡ್ಡಿ ಅವರು ಮಣ್ಣಿನ ಸಂರಕ್ಷಣೆಯಲ್ಲಿ ರೈತರ ಪಾತ್ರವನ್ನು ತಿಳಿಸಿದರು.


ಜಿ ಕೆ ವಿ ಕೆಯ ಮಣ್ಣು ವಿಜ್ಞಾನ ಮತ್ತು ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾದ ಡಾ. ಜಿ.ಜಿ. ಕಾದಳ್ಳಿ ಮತ್ತು ಕೃಷಿ ವಿಸ್ತರಣಾ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ. ಟಿ. ಲಕ್ಷ್ಮಿನಾರಾಯಣ್ ಉಪಸ್ಥಿತರಿದ್ದರು.

Exit mobile version