Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

ICL ಸಹಭಾಗಿತ್ವ ಸಭೆ.

ದೊಡ್ಡರಾಯಪ್ಪನಹಳ್ಳಿಯಲ್ಲಿ ಕೃಷಿ ಕಾರ್ಯಾನುಭವ ಕಾರ್ಯಕ್ರಮ ದಡಿಯಲ್ಲಿ ಶಿಬಿರಾರ್ಥಿಗಳು ದಿನಾಂಕ 23/11/2023 ರಂದು ICL (Israel Chemicals Ltd.) ಕಂಪನಿಯ ಸಹಭಾಗಿತ್ವದಲ್ಲಿ ‘ ಸಮಗ್ರ ಪೋಷಕಾಂಶ ನಿರ್ವಹಣೆ ‘ಯ ಕುರಿತು ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಪ್ರಾದೇಶಿಕ ಬೇಸಾಯ ಶಾಸ್ತ್ರಜ್ಞರಾದ ರಾಜೇಶ್ ರವರು ಕಂಪನಿಯ ಉತ್ಪನ್ನ ಗಳು ಹಾಗೂ ಅವುಗಳ ಬಳಕೆ ಮತ್ತು ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.ಬೆಳೆಗಳಲ್ಲಿ ಪೋಷಕಾಂಶ ನಿರ್ವಹಣೆಯ ಬಗ್ಗೆ ತಿಳಿಸಿದರು.
ಕೃಷಿ ವಿಶ್ವವಿದ್ಯಾನಿಲಯ, ಜಿ ಕೆ
ವಿ ಕೆ , ಬೆಂಗಳೂರಿನ ಸಸ್ಯರೋಗಶಾಸ್ತ್ರಜ್ಞ ರಾದ ಡಾ. ಮಂಜುನಾಥ್ ರವರು ಸ್ಥಳೀಯವಾಗಿ ಮುಖ್ಯ ಬೆಳೆಗಳಾದ ಗುಲಾಬಿ, ಸೇವಂತಿಗೆ ಮತ್ತು ದಾಳಿಂಬೆಯಲ್ಲಿ ಕಂಡುಬರುವ ಕೀಟ ಹಾಗೂ ರೋಗಗಳ ಕುರಿತು ವಿವರಿಸಿದರು. ಇವುಗಳ ನಿರ್ವಹಣೆಯ ಬಗೆಗೆ ಮಾಹಿತಿ ನೀಡಿದರು. ಕೀಟ,ರೋಗ ನಿಯಂತ್ರಣದ ಜೊತೆಗೇ ಪೋಷಕಾಂಶದ ನಿರ್ವಹಣೆಯೂ ಮುಖ್ಯವಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು. ರೈತರ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದರು.
ರೈತ ಮುಖಂಡರಾದ ಚೊಕ್ಕರೆಡ್ಡಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ವೇತಾ ಮುನಿಶಾಮಿಗೌಡರವರು ಪಾಲ್ಗೊಂಡಿದ್ದರು.

Exit mobile version