Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

ಕಿರುನಾಟಕ. ವಿಷಯ – ಬೆಳೆಗಳಿಗೆ ಔಷಧಿ ಸಿಂಪಡಿಸುವಾಗ ಪಾಲಿಸಬೇಕಾದ ಸುರಕ್ಷತಾ ಕ್ರಮಗಳು.

ದೊಡ್ಡರಾಯಪ್ಪನಹಳ್ಳಿಗೆ ಗ್ರಾಮೀಣ ಕಾರ್ಯನುಭವ ಕಾರ್ಯಕ್ರಮದ ಸಲುವಾಗಿ ಆಗಮಿಸಿರುವ ಜಿಕೆವಿಕೆ ವಿದ್ಯಾರ್ಥಿಗಳು ಕೀಟನಾಶಕ ಹಾಗೂ ರೋಗನಾಶಕ ಸಿಂಪಡಿಸುವಾಗ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತಾಗಿ ಕಿರುನಾಟಕ ವನ್ನು ಪ್ರದರ್ಶನ ಮಾಡಿದರು.ಅದರ ಜೊತೆಗೆ ಕೀಟನಾಶಕಗಳ ವಿಧ ಹಾಗೂ ಅವು ಆರೋಗ್ಯದ ಮೇಲೆ ಬೀರುವ ಪರಿಣಾಮದ ಕುರಿತು ಮಾಹಿತಿ ನೀಡಿದರು.ಕೀಟನಾಶಕ ಗಳ ವಿಷಕಾರಿ ಅಂಶದ ಕುರಿತಾಗಿ ತಿಳಿಸಿಕೊಟ್ಟರು.ಔಷಧಿ ಸಿಂಪಡಿಸುವಾಗ ಧರಿಸಬೇಕಾದ ಸುರಕ್ಷತಾ ಕನ್ನಡಕ,ಕೈಗವಸು,ಮುಖಗವಸು ಗಳನ್ನು ರೈತರಿಗೆ ನೀಡಿ ಇದರ ಕುರಿತಾಗಿ ಜಾಗೃತಿ ಮೂಡಿಸಲಾಯಿತು.ಸಭೆಯಲ್ಲಿ ಹಲವಾರು ರೈತರು ಪಾಲ್ಗೊಂಡಿದ್ದರು..

“ಔಷಧಿ ಸಿಂಪಡಿಸುವಾಗ ಇರಲಿ ಎಚ್ಚರ”

Exit mobile version