Site icon DEPARTMENT OF AGRICULTURAL EXTENSION, COLLEGE OF AGRICULTURE, GKVK, BENGALURU – 560065

History

ಇತಿಹಾಸ

ಹೊಡಾಘಟ್ಟ ಗ್ರಾಮವು ೭೫೦ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿದೆ ಕೆಂಪೇಗೌಡರ ಆಳ್ವಿಕೆಯಲ್ಲಿ ಕಟ್ಟಿದ ೭ ಸುತ್ತಿನ ಕೋಟೆ ನಮ್ಮ ಹುತ್ರಿದುರ್ಗದಲ್ಲಿದೆ. ಚೋಳರು ಕಟ್ಟಿದಂತಹ ಕೆರೆ ಈಗಲೂ ಕೂಡಾ ಜೀವಂತವಾಗಿದೆ (೧೦೦0 ಎಕರೆ)

ಹಿಂದಿನ ಕಾಲದ ಪೂರ್ವಜರು ವಡಾರಟ್ಟಿ ಎಂಬ ಹೆಸರಿನಿಂದ ಶುರುವಾಗಿ ಈಗ ಹೊಡಾಘಟ್ಟವಾಗಿ ಬದಲಾವಣೆಗೊಂಡಿದೆ.

ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಊರಿನ ಜನರೆಲ್ಲ ಸೇರಿ ಗ್ರಾಮದೇವತೆ ಅಮ್ಮನವರನ್ನು ಸಾಗುವಿಕೆ ಮಾಡುತ್ತಾರೆ ಇದನ್ನು ಅಮ್ಮನ ಸಾಗುವಿಕೇ ಎಂದು ಕರೆಯುತ್ತಾರೆ.

ಹುತ್ರಿದುರ್ಗದ ಬೆಟ್ಟದ ವಿಶೇಷತೆ:-

ಬೆಟ್ಟದಲ್ಲಿ ವೀರಭದ್ರಸ್ವಾಮಿ ಉದ್ಭವ ಮೂರ್ತಿಯನ್ನು ಕಾಣಬಹುದು ಮತ್ತು ಬಿಸಿಲು ಬಸವಣ್ಣ ಮೆರವಣಿಗೆಯನ್ನು ಗ್ರಾಮಸ್ಥರು ಒಟ್ಟಾಗಿ ಸೇರಿ ಆಚರಿಸುತ್ತಾರೆ.

ಗ್ರಾಮಸ್ಥರ ನಂಬಿಕೆ :- ಮಳೆ ಬರುವಿಕೆಗಾಗಿ ಬೆಟ್ಟದ ಮೇಲೆ ಪೂಜೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು .

ನಿಗೂಢ:- ಬಿಸಿಲು ಬಸವಣ್ಣನ ಮೂರ್ತಿಯನ್ನು ಸರಿಸಲು ಪ್ರಯತ್ನಿಸಿದಾಗ ಅವರ ತಲೆ ಸೀಳುವಿಕೆ ಕಂಡು ಬಂದಿದೆ .

ಇತ್ತೀಚಿಗೆ ಸರ್ಕಾರವು ಶಂಕರೇಶ್ವರ ದೇವಸ್ಥಾನದ ಕಡೆಗೆ ಗಮನ ಕೊಟ್ಟು ಈಗ ಇದು ಪ್ರವಾಸಿಮಂದಿರವಾಗಿದೆ.

Exit mobile version